ತಂದೆ ಮಗಳ ಸಂಭಾಷಣೆಯ ಒಂದು ತುಣಕು.
ತಂದೆ : ಮಗು, ನಿನಗೆ ಎಂತಹ ಗಂಡನ್ನು ಹುಡುಕಲಿ.
ಜಾಹ್ನವಿ : ಯಾಕಪ್ಪ? ಇದ್ದಕ್ಕಿದ್ದಹಾಗೆ ಈ ಮಾತು.
ತಂದೆ : ಹಾಗೆ ಒಂದು ತೀಕ್ಷ್ಣ ಚರ್ಚೆ ಮಾಡೋಣ ಅಂತ ಮನಸ್ಸಾಗಿದೆ. ನಿನ್ನ ಮಾತುಗಾರಿಕೆಯ ಮಜಲನ್ನು ನೋಡೂ ಆಸೆ.
ಜಾಹ್ನವಿ : ಹಾಗೋ! ಸರಿ ಅಣ್ಣ, ಹಾಗೆ ಆಗಲಿ, ನಾನು ವಿಷಯೋಚಿತವಾಗಿ ಮಾತನಾಡಿ ಬಹಳ ದಿನವಾಗಿದೆ.
ತಂದೆ : ಮಗು ಒಂದು ಹೆಣ್ಣಿಗೆ ತನ್ನ ಗಂಡ ಸೂರ್ಯನಂತಿರಬೇಕೆoದು ಆಸೆ ಇರುತ್ತೋ ಅಥವಾ ಚಂದ್ರನಂತಿರಬೇಕೆoದೊ?
ಜಾಹ್ನವಿ : ಮೇಲ್ನೋಟಕ್ಕೆ ಸುಲಬದ ಪ್ರಶ್ನೆಯಾದರೂ ಅರ್ಥಗರ್ಭಿತವಾಗಿದೆ. ತಟ್ಟನೆ ಉತ್ತರಿಸಬೇಕೆಂದರೆ, ಸಾಮಾನ್ಯ ಒಂದು ಹೆಣ್ಣು, ನನ್ನ ಗಂಡ ತoಪಾದ ಮನಸ್ಸುಳ್ಳವನು, ಶಾoತ ಮೂರ್ತಿಯಾದ ಚಂದ್ರನಂತವನಾಗಿರಬೇಕು ಎಂದೇ ಹೇಳುತ್ತಾಳೆ. ಆದರೆ ಚಂದ್ರ ಪರಾವಲಂಬಿ, ಬೇರೆಯರನ್ನು ಅವಲಂಬಿಸಿ ಬದುಕುತ್ತಿರುವ ಗಂಡನ್ನು ಯಾವ ಧೈರ್ಯದ ಮೇಲೆ ಹೆಣ್ಣು ಮದುವೆಯಾದಾಳು? ಅದರ ಮೇಲೆ ಅವನು ಕಲೆಯುಳ್ಳ ಕುರೂಪಿ. ದಿನದಿನಕ್ಕೂ ಯಶಸ್ಸನ್ನು ಕಂಡು ಶುಕ್ಲಪಕ್ಷದ ತುದಿಯನ್ನು ಮುಟ್ಟಿರುವ ಗಂಡನ್ನು ಮದುವೆಯಾಗಿ ಆಮೇಲೆ ಕೃಷ್ಣ ಪಕ್ಷದಲ್ಲಿ ಜೀವನ ಸಾಗಿಸೋ ಕರ್ಮ ಹೆಣ್ಣಿಗೆ ಬಂದರೆ? ಅದರಲ್ಲೂ ರಾತ್ರಿಪಾಳೆ ಮಾಡೋ ಗಂಡು ಹೆಣ್ಣಿಗೆ ಎಷ್ಟು ಸಮಂಜಸ...
ತಂದೆ : ಹಾಗಾದರೆ ಚಂದ್ರನನ್ನು ಇಷ್ಟು ಜರೆಯುವ ಹೆಣ್ಣು ಜಗತ್ಪ್ರಸಿಧ್ಧನಾದ, ಸ್ವಾವಲಂಭಿಯಾದ, ಸದಾ ಜಗಕ್ಕೋಸ್ಕರ ಸವೆಯುತ್ತಿರುವ ಸೂರ್ಯನಂತವನು ಇಷ್ಟವಾದಾನೆ?
ಜಾಹ್ನವಿ : ಖಂಡಿತಾ ಇಲ್ಲ. ಸದಾ ಜನರ ಸೇವೆಯಲ್ಲಿರುವ ಗಂಡು ಹೆಂಡತಿಗೆಲ್ಲಿ ಸಮಯ ಕೊಟ್ಟಾನು? ಸದಾ ಬೇರೆಯಾವರಿಗೋಸ್ಕರ ತನ್ನ ಒಡಲನ್ನು ಬೆಂಕಿಯ ಉಂಡೆಯನ್ನಾಗಿಸಿಕೊoಡು ಪ್ರಕಾಶಮಾನವಾಗಿ ಧಗ ಧಗನೆ ಉರಿಯುತ್ತಿರುವವನ ಒಡಲಲ್ಲಿ ಹೆಣ್ಣಿನ ಅಸ್ತಿತ್ವಕ್ಕೆ ಬೆಲೆ ಎಲ್ಲಿ.
ತಂದೆ : ಸದಾ ಹೆಣ್ಣಿನ ಸುತ್ತಲೇ ಸುತ್ತರಿಯುವ ಚಂದ್ರನoತವನೂ ಬೇಡ, ಹೆಣ್ಣನ್ನೇ ತನ್ನ ಸುತ್ತ ಸುತ್ತುವoತೆ ಆಕರ್ಷಿತನಾದ ಭಾಸ್ಕರನಂತವನೂ ಬೇಡ ಅಂದರೆ, ಚಕ್ರವರ್ಥಿಯಾದ ಗಂಡ ಬೇಕು ಆದರೆ ಮನೆಯಲ್ಲಿರಬೇಕು ಅನ್ನೋ ಆಗದ ವಾದವೇ ನಿನ್ನದು?
ಜಾಹ್ನವಿ : ಹೆಣ್ಣು ಯಾವಾಗಲೂ ಸೂರ್ಯನಂತಹ...
ಅಮ್ಮ : ಎoತದು ಕಾಡು ಹರಟೆ ಅಪ್ಪ ಮಗಳದು, ಊಟಕ್ಕೆ ಬನ್ನಿ ಹೊತ್ತಾಯ್ತು.
ತಂದೆ : ಸರಿ ನಡಿ ಊಟ ಮಾಡೋಣ, ನಿನ್ನ ಮಾದುವೆಗೆ ಇನ್ನೂ ಸಮಯ ಇದೆ, ಆಗ ಯಾವ್ದಾದ್ರು ಗುರು ಗ್ರಹದ ಗಂಡು ಹುಡ್ಕೋಣ.
-ಹರೀಶ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ