ಸುಮಾರು ೨ ತಿಂಗಳ ನಂತರ ಊರಿನ ನೆನಪಾಯಿತು, ಅದಕ್ಕೇ ದಿಡೀರನೆ ರೈಲಿನಲ್ಲಿ ತತ್ಕಾಲ ಟಿಕೆಟ್ ಪಡೆದು ಹೊರಟೆ. ಬೆಳಗ್ಗೆ ೫ ಗಂಟೆಗೆ ಊರು ಮುಟ್ಟಿಸಿತು.
ನಮ್ಮ ಸಿದ್ರಾಮಯ್ಯನೋರು ಬಡವರ ಬಾಯಿಗೆ ಅಕ್ಕಿ ಭಾಗ್ಯ ಕೊಟ್ಟ ಹಾಗೆ, ನಮ್ಮೂರಿಗೆ ವರುಣ ಮಳೆ ಭಾಗ್ಯ ಕೊಟ್ಟಿದ್ದ. ಬರೋಣ ಬ್ಯಾಡವೋ ಅನ್ನೋ ತರ ಬರ್ತಿತ್ತು.
ಇಳಿದ ಕ್ಷಣ ಆಶ್ಚರ್ಯ, ೨ ತಿಂಗಳಲ್ಲಿ ಸಂಪೂರ್ಣ ಬದಲಾದ ಚಿತ್ರಣ.
ಹೊಸ ಪ್ಲಾಟ್ಫಾರ್ಮ್, ಹಳೇ ಹಂಚಿನ ಮನೆ ಇದ್ದ ರೈಲ್ವೆ ನಿಲ್ದಾಣದ ಕೌಂಟರ್, RCC ಕಟ್ಟಡವಾಗಿತ್ತು. ಬೆಳಕೇ ಇಲ್ಲದ ಪಾಳು ಬಿದ್ದ ಹಾಗೆ ಇದ್ದದ್ದು, ಜಗಮಗ ಅಂತ ಹೊಳೆಯುತ್ತಿತ್ತು. ಅಲ್ಲೇ ಇದ್ದ ಒಬ್ಬ ಮೋದಿ ಸರ್ಕಾರವನ್ನು ನೆನೆದು ಮಾತಾಡುತ್ತಾ ಹೋರಾಟ.
ಮನೆ ತಲುಪಿ, ಮತ್ತೆ ಮಲಗಿ ಎದ್ದು. ತಿಂಡಿಗೆ ತಯಾರಾದೆ. ಚಪಾತಿಗೆ ಬೆಲ್ಲ ಹಾಕಿ ಮಾಡಿದ ಮಾವಿನ ಸೀಕರಣೆ, ಗಸಗಸೆ ಪಾಯಸ ತಯಾರಾದದ್ದನ್ನು ನೋಡಿ, ಫುಲ್ ಕುಶ್. ಮಗ ಬಂದಾಗ ಹಬ್ಬ ಮಾಡು ಅನ್ನೋ ಮನಸ್ತಿತಿ ಈಗ ಸುಮಾರು ಮನೆಗಳಲ್ಲಿ ಬಂದಿದೆ.
ತಿಂಡಿ ತಿನ್ನುವಾಗ, ಟಿವಿ ಹಾಕಿ ಚಾನಲ್ ಬದಲಿಸುತ್ತಾ ಹೊರಟೆ. ಯಾವದೂ ಸಿಗದಿದ್ದಕ್ಕೆ ನ್ಯೂಸ್ ಹಾಕಿ ತಿನ್ನುತ್ತಾ ಕೂತೆ. ಮಂಡ್ಯ ರೈತರ ಆತ್ಮಹತ್ಯೆ ಬಗ್ಗೆ ಒಂದು ಕಾರ್ಯಕ್ರಮ ಬರ್ತಾ ಇತ್ತು.
ಕಬ್ಬು ಬೆಳೆದ ಕೆಲವು ರೈತರು, ಬೆಳೆದ ಕಬ್ಬು ತೆಗೆದುಕೊಂಡ ಕಾರ್ಖಾನೆಯವರು ಹಣ ಕೊಡದದ್ದಕ್ಕೆ ಆತ್ಮಹತ್ಯೆ, ಮತ್ತೆ ಕೆಲವರು ಬೆಳೆ ಹಾನಿಯ ವಿಮೆ( Insurance ) ಬರದಿದ್ದಕ್ಕೆ ಆತ್ಮಹತ್ಯೆ.
ಇನ್ನೂ ಕೆಲವರು ಸಾಲ ಮಾಡಿ ಬೆಳೆದ ಕಬ್ಬನ್ನು ಕರೀದಿಸಲು ನಿರಾಕರಿಸುತ್ತಿರುವ ಕಾರ್ಖಾನೆ ನೋಡಿ ಅಸಹಾಯಕತೆ ಇಂದ ಆತ್ಮಹತ್ಯೆ. ಹೀಗೆ ಹಲವಾರು ಕಾರಣಕ್ಕೆ. ಒಟ್ಟಿನಲ್ಲಿ ಮನ ಕಲಕುವ ಕಾರ್ಯಕ್ರಮ.
ಹಾಗೆ ತಿನ್ನುತ್ತಿದ್ದ ಸಿಹಿ ಕಡೆ ಗಮನ ಹರಿಯಿತು. ಪ್ರತಿಯೊಬ್ಬರೂ ತಿನ್ನಲು ಸಿಹಿ ಒದಗಿಸಿದ ರೈತನಿಗೆ ಸಿಕ್ಕಿದ್ದು ವಿಷ. ತಿನ್ನಲು ಮುಜುಗರ ಅನಿಸಿತು. ಮತ್ತದೇ, ಆಷಾಡ ಮಾಸದಲ್ಲೂ ಸಿಹಿ ತಿನ್ನುವಂತೆ ಮಾಡಿದ ರೈತನಿಗೆ ನೇಣಿನ ಕುಣಿಕೆ.
ಆಶ್ಚರ್ಯದ ಸಂಗತಿ ಏನು ಅಂದರೆ, ಇಸ್ಟೆಲ್ಲಾ ಆದರೂ, ಇದೇ ಜಾಗಕ್ಕೆ ಸೇರಿದ ಮಾನ್ಯ ಸಿದ್ದರಾಮಯ್ಯ ನೋರು ಗಾಢ ನಿದ್ದೆಯಲ್ಲಿರುವುದು, ಮಂಡ್ಯದ ಗಂಡು ಅಂತ ಪದೇ ಪದೇ ಗಂಡು ಗಂಡು ಅಂತ ಹೇಳ್ತಿರೋರು ಎಲ್ಲಿ ಹೋದ್ರು.
ಒಂದು ದಿನ ಸoಬಳ ಬರೋದು ತಡವಾದರೆ ಅಥವಾ ಮಾರ್ಚ್ ನಲ್ಲಿ ಬಾರೋ ಬೋನಸ್ ಏಪ್ರಿಲ್ ನಲ್ಲಿ ಬಂದರೇ ಹಾರಾಡುವ ಹಕ್ಕು ನಮಗಿದೆ ಎಂದಾದರೆ, ರೈತರಿಗೆ ಯಾಕಿಲ್ಲ ಈ ಸವಲತ್ತು, ಅವರೇಕೆ ಮಾರಿದ ಹಣಕ್ಕ ವರ್ಷಗಟ್ಟಲೆ ಕಾಯಬೇಕು.
ಅವನೇಕೆ ಬೇರೆಯವರಿಗೆ ಸಿಹಿ ತಿನ್ನಿಸಿ ತಾನು ವಿಷ ಕುಡಿಯಬೇಕು.
ಸಿಹಿ ತಿನ್ನುವಾಗ ಒಮ್ಮೆ ಬೆಳೆದ ರೈತನನ್ನು ನೆನೆಸಿಕೊಳ್ಳಿ ಮಾನ್ಯ ಮಂತ್ರಿಗಳೇ, ನೀವು ತಿನ್ನುವ ಪದಾರ್ಥ ಕ್ರೌರ್ಯ ಅನಿಸಲಿಲ್ಲ ಎಂದಾದರೆ ಮನುಷ್ಯತ್ವ ಸತ್ತಿದೆ ಎಂದರ್ಥ. ದಯವಿಟ್ಟು ಎಲ್ಲರೂ ಮಾಡುವಂತೆ ಚಾನೆಲ್ ಬದಲಿಸಿ ತಿನ್ನಬೇಡಿ.
ಇದೆಲ್ಲವನ್ನೂ ನೋಡಿ, ನೋಡಿ ಸಾಕಾಗಿ ಬೆಳೆಯುವುದನ್ನು ನಿಲ್ಲಿಸಿ, ಪಟ್ಟಣಕ್ಕೆ ಒಲಸೆ ಹೋಗೋ ಮುಂದಿನ ಪೀಳಿಗೆ ಸೃಷ್ಟಿಯಾಗುತ್ತಿದೆ. ಆ ಕರಾಳ ದಿನ ಬರದಂತೆ ಎಚ್ಚರ ವಹಿಸದಿದ್ದಲ್ಲಿ ನಮ್ಮ ನಾಶಕ್ಕೆ ನಾವೇ ತಯಾರಾದಂತೆ.
-ಹರೀಶ್

That's the reason your Dad didn't made you a farmer
ಪ್ರತ್ಯುತ್ತರಅಳಿಸಿIrabahudu
ಅಳಿಸಿ