ಎಲ್ಲರೂ ಬಯ್ಯಲು ನಾಲಿಗೆ ತುದಿಯಲ್ಲಿರುವ, ವಿಡಂಬನೆಗೆ ಸಹಕರಿಸುವ, ಎಲ್ಲ ತಂದೆ ತಾಯಿಯರೂ ತಮ್ಮ ಮಕ್ಕಳು ಅದಾಗಬೇಕೂ ಅಂತ ಬಯಸುವ, ಅದಾಗಿಸಿದ ಮೇಲೆ, ಅಯ್ಯೋ ಅವನು ನಮ್ಮ ಬಳಿ ಇರೋಲ್ಲ ಅಂತ ಗೋಳಾಡಿಸುವ ಉದ್ಯೋಗ. ಒಂದುತರ ಬೆಂಗಳೂರಿನ ಪರಿಸ್ಥಿತಿ ಈ ಉದ್ಯೋಗಿಗಳಿಗೆ. ಎಲ್ಲರಿಗೂ ಬೇಕು ಹಾಗೆ ಎಲ್ಲರಿಗೂ ಬೇಡ.
ಅದು ಯಾರ ಬಲವಂತವೂ ಇಲ್ಲದೆ, ಮುಂದೆ ಮಾಡುವ ಕೆಲಸದ ಪರಿವೂ ಇಲ್ಲದೆ ಶುಬ್ರ ಅನ್ನುವುದಕ್ಕಿಂತ ಖಾಲಿ ಮನಸ್ಸಿನಲ್ಲಿ ಇಂಜಿನಿಯರ್ ಕಾಲೇಜಿಗೆ ಸೇರಿದ ನಮ್ಮಂತ ಮನಸ್ಸುಗಳೇ ಬಹುತೇಕ. ಅದು ಏನು ಕಲಿಸಿದರೋ, ಅದು ಏನು ಕಲಿತೆವೋ. ಒಟ್ಟಿನಲ್ಲಿ ಒಂದು ಬೀಜವನ್ನು ಕುಂಡದಲ್ಲಿಟ್ಟು ಸಸಿ ಮಾಡಿ ಬದುಕಿಕೋ ಅಂತ ಬಯಲಿಗೆ ಬಿಟ್ಟರು.
ಬಯಲಿನ ಪರಿಸ್ಥಿತಿಗೆ ಹೊಂದಲಾರದೆ ಹಪತಪಿಸುತ್ತಿದ್ದ ಸಮಯದಲ್ಲಿ, ಆ ಸಸಿಯನ್ನು ಬೆಳೆಸಿ ಪೋಷಿಸಿ, ಫಲವನ್ನು ಪಡೆಯುತ್ತಿರುವುದು ಈ ಕ್ಷೇತ್ರಗಳು.
ಬೆಳೆದು ದೊಡ್ಡದಾದ ಮೇಲೆ, ನನ್ನ ಪ್ರಯತ್ನದಿಂದ ನಾನು ದೊಡ್ದದಾದೆ, ನೀ ಕೊಡುತ್ತಿರುವ ಆಹಾರ ನಾ ಕೊಡುತ್ತಿರುವ ಫಲಕ್ಕೆ ಸರಿ ಇಲ್ಲ. ಇದೇ ಫಲ ಅಲ್ಲಿ ಕೊಟ್ಟರೆ ಅಂತ ಯೋಚನೆ.
ಜ್ಞಾನದ ಆಳಕ್ಕೆ ಇಳಿಯಲು ಸಮಯದ ಅಭಾವವೋ, ಆಸಕ್ತಿಯ ಕೊರತೆಯೋ ಅಥವಾ ಅವಶ್ಯಕತೆ ಇಲ್ಲ ಎಂಬ ಭಾವವೋ, ಒಟ್ಟಿನಲ್ಲಿ, ಬಟ್ಟಲಿನಲ್ಲಿ ನೀರನ್ನು ತುಂಬಿಕೊಂಡು ಸಮುದ್ರದಂತೆ ಬೀಗುತ್ತಾ, ಅವಶ್ಯಕತೆ ಬಿದ್ದಾಗ ಬಟ್ಟಲಿನ ನೀರು ಸಾಕಾಗದೆ, ತೊಳಲಾಡಿ, ಸರಸ್ವತಿಯಿಂದ ಲಕ್ಷ್ಮಿ ಅನ್ನೋದನ್ನು ಮರೆತು, ಲಕ್ಷ್ಮಿಗಾಗಿ ಸರಸ್ವತಿ ಅನ್ನೋ ಮನಸ್ಥಿತಿ ತಲುಪಿ, ಮತ್ತೆ, ಇದ್ದ ಬಟ್ಟಲಿನ ನೀರನ್ನೇ ಸೋಸಿ ತಯಾರು ಮಾಡಿಕೊಂಡು ಬೇರೆ ಜಾಗಕ್ಕೆ ಗುಪ್ತಗಾಮಿನಿಯoತೆ ಪ್ರವಹಿಸಿ ಬಿಡುವುದು. ಅಲ್ಲಿ ಮತ್ತದೇ ಆರ್ಭಟ.
ತಾವು ಮಾಡುತ್ತಿರುವ ಉದ್ಯೋಗವೊಂದನ್ನು ಬಿಟ್ಟು ಬೇರೆಲ್ಲಾ ಕೆಲಸಗಳು ಚೆನ್ನಾಗಿದೆ, ಏನೋ ಯಾವುದೋ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಉದ್ಯೋಗ ಅನ್ನೋ ಭಾವವವನ್ನು ತೋರುತ್ತಾ, ನೆಮ್ಮದಿ ಕೆಳದುಕೊಂಡು, ಸಮೋಸ ಮಾರಿದ್ರೆ ಇದಕ್ಕಿಂತ ಜಾಸ್ತಿ ಬರ್ತಿತ್ತು, ಪಾನಿ ಪೂರಿಯೋನು ನಮಗಿಂತ ಜಾಸ್ತಿ ದುಡಿತಾನೆ ಅಂತ ಹಣದ ಲೆಕ್ಕದಲ್ಲಿ ತಮ್ಮನ್ನು ತಾವು ತೂಗಿಸಿಕೊಳ್ಳುತ್ತಾ ತಮ್ಮ ಜ್ಞಾನದ ದೇಹವನ್ನು ಬೆತ್ತಲಾಗಿಸಿ, ಗಂಟೆಗೊಂದು ಸಲ ಕಾಫಿ ಚಹಾ ಕುಡಿಯುವುದು,ಸಿಗರೇಟು ಸೇದುವುದು.
ಚಹಾ ಅಂಗಡಿಯವನು, ಪಾಪ! ಕೆಲಸ ಮಾಡಿ ಮಾಡಿ ತಲೆ ಕೆಟ್ಟಿರತ್ತೆ ಅಂತ ಅವಾ ಲೋಚಗುಟ್ತಾನೆ. ಆದ್ರೆ, ಹೋಗ್ತಾ ದುಡ್ಡು ಕೊಡುವಾಗ, ಎಸ್ಟ್ ದುಡಿತೀಯ ದಿನಕ್ಕೆ ಅಂತ ಕೇಳಿ ಇವ ಮುಂದಿನ ಚಹಾಕೆ ತಯಾರಿ ತಗೋತಾನೆ.
ಈ ಕೆಲಸ, ಬಿಡಿಸಿ ತಿನ್ನಬೇಕಾದ ಹಣ್ಣಿನoತೆ ಕಂಡರೆ, ಬೇರೆಲ್ಲಾ, ಬಿಡಿಸಿ ತಿನ್ನಲು ತಯಾರಾದ ಹಣ್ಣುಗಳoತೆ ಕಾಣುತ್ತವೆ.
ಹಾಗೇ ಜಲಪಾತ ಕಾದoಬರಿಯಲ್ಲಿ ಓದಿದ್ದ ನೆನಪು, ಪ್ರಸವದ ನೋವು, ಸಹಜವಾಗಿ ಹೆರುವ ಎಲ್ಲ ಹೆಣ್ಣಿಗೂ ಒಂದೇ. ಅದನ್ನು ಮುಂದೆಬರುವ ಮಗುವಿಗಾಗಿ ಅವಡುಗಚ್ಚಿ ಅನುಭವಿಸುತ್ತಾಳೆ, ನೋವು ಬರದಿದ್ದಲ್ಲಿ ಹೆದರಿ ನೋವು ಬರಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುತ್ತಾಳೆ ಅಂತ.
-ಹರೀಶ್
Harya, olle shabda jodane, haritavada vichara. Innu swalpa olle vicharagalna bittidiya.
ಪ್ರತ್ಯುತ್ತರಅಳಿಸಿ