ವಯಸ್ಸಾಗಿ ಸುಕ್ಕುಗಟ್ಟಿದ ಮುಖ, ಇರುವ ಬಿಳಿ ಕೂದಲನ್ನ ಚೆನ್ನಾಗಿ ಕೊಬ್ಬರಿ ಎಣ್ಣೆ ಹಾಕಿ ಹಿಂದಕ್ಕೆ ಬಾಚಿದ ಕೂದಲು, ಕಾಖಿ ಅಂಗಿ ಕಾಖಿ ಪ್ಯಾಂಟು ಹಾಕಿ, ಹೆಗಲ ಮೇಲೆ ಒಂದು ಟವೆಲ್ ಹೊದ್ದ ಕುಳ್ಳು ದೇಹದ ರಂಗಪ್ಪನ ಮುಖದಲ್ಲಿ ಆಶ್ಚರ್ಯ!
ಓಹ್ ರಾಮಪ್ಪಾ, ಹೆಂಗಿದೀಯ, ಸಂದಾಗಿದೀಯ. ಏನ್ ಬಾಂಬೆಗೆ ಹೊದೊನ್ ಈಗ್ಲ ಕಾಣೋದು, ಏಟು ದಿನ ಆಯ್ತು.
ಹೂ ರಂಗಪ್ಪ ಚನಗಿದಿನಿ, ಏನ್ ಕೆಲಸ ಜೋರ. ಎಲ್ಲಾ ನಿಂದೆ ಉಸ್ತುವಾರಿನ ಈಗಲೂ ಶಾಲೆಲಿ.
ಏನ್ ಸಾಲೇನೋ ಏನೋ ದಣಿ, ನೀವ್ಗುಳು ಇದ್ದಾಗ ಇದ್ದಂಗಿಲ್ಲ, ಇಸ್ಕೂಲಿಗೆ ಹುಡ್ಗುರೆ ಬರಕ್ಕಿಲ್ಲ ಅಂತವೇ.
ಆ ಪ್ರೈವೇಟ್ ಮುಂಡೆಮಕ್ಳು ಸುರು ಮಾಡಿದ್ಮೇಲೆ, ಈಕಡೆ ಹರ್ವು ಕಮ್ಮಿನೆ.
ಹಿಂದೆ ಎಸ್ಟ್ ಸಂದಾಗಿತ್ತು, ಸಾಲೆ ತುಂಬಾ ಮಕ್ಳು, ಒಂದ್ನೇಕಿಲಾಸಿಂದ ಏಳ್ನೆ ಕಿಲಾಸ್ತನ ಹೈಕ್ಳೋ ಹೈಕ್ಳು, ಒಲ ಊಳೋ ಮಾದನ ಮಕ್ಳು ಇದೆ ಇಸ್ಕೂಲು, ಡಿಸಿ ಆಪಿಸರ್ ಮಕ್ಳು ಇದೆ ಇಸ್ಕೂಲು.
ನೀವ್ ಕಂಡಂಗೆ ಆ ಡಾಕುಟ್ರು ಸೇಸಾದ್ರಪ್ನೋರ ಮಕ್ಳು ಇಲ್ಲೇ ಅಲ್ವೇ ಬತ್ತಿದ್ದು. ಇಲ್ ಅಲ್ದೆ ಇನ್ನೆಲ್ ಹೋಗ್ತವೆ. ದೊಡ್ ದೊಡ್ ಆಪೀಸರ್ ಮಕ್ಳಿಗ್ ತಾಕೀತ್ ಮಾಡಿವ್ನಿ ನಾನು, ಅಂತ ಮೀಸೆ ಮೇಲೆ ಕೈ ಹಾಕಿದ.
ಹೂ ಹೌದು. ಇದೊಂದೇ ಅಲ್ವೇ ಇದ್ದದ್ದು, ಬಹಳ ಕಳಕಳಿಯಿಂದ ಕಲಿಸುತ್ತಿದ ಕನ್ನಡದ ಸೀತಾರಾಮಯ್ಯ ಮೇಷ್ಟ್ರು, ಲೆಕ್ಕದಲ್ಲಿ ಲಾಯಕ್ಕಿದ್ದ ಉಮೇಶಪ್ಪ, ಇತಿಹಾಸವನ್ನು ಹೇಳಕ್ಕೆ ಬರದಿದ್ದರೂ ಪರೀಕ್ಷೆಲಿ ಅಂಕ ಬರುವಷ್ಟು ಕತೆ ಹೇಳುತ್ತಿದ್ದ ಪುಷ್ಪ ಟೀಚರ್.
ಮಕ್ಕಳನ್ನ ಮುಖ್ಯಮಂತ್ರಿ ಮಾಡೂದೆನು, ಸಫಾಯಿ, ವೇಳಾ, ಉಸ್ತುವಾರಿ, ನೀರಾವರಿ. ಅಬ್ಬಾ ಎಷ್ಟು ಮಂತ್ರಿಗಳು. ಹ ಹ. ಹಾಗೇ ನೆನಪಿನ ಹರಿವು ಬಂದಂಗೆ ಪಟ ಪಟನೆ ಹೇಳಿದ.
ಈಗ್ಲೂ ಅದೆ, ನೆಟ್ಟಗೆ ಐವತ್ತು ಮಕ್ಳಿಲ್ಲ, ಓದಿದ್ರೆಷ್ಟು ಬುಟ್ರೆಷ್ಟು, ಮನೇಲಿ ಕಿತಾಪತಿ ಮಾಡ್ತವೆ ಮುಂಡೇವು ಅಂತ ಇಲ್ಲಿ ತಕ್ಕಬಂದ್ ಬುಟ್ಟವ್ರೆ ಅನ್ನೋತರ ಐತೆ. ಅದ್ರುಮೇಲೆ ಈ ಮೆಟ್ರಿಗೂ ಆಸ್ತೆ ಅಷ್ಟುಕ್ಕಷ್ಟೇ,
ಹಿಂದ್ಲಂಗೆಲ್ಲಾ ಕಲ್ಸುದಿಲ್ಲ, ಮಕ್ಳು ಮುಕ್ಳಿಮೇಲೆ ಬಿಟ್ಟು ತಿದ್ದಂಗಿಲ್ಲ. ಅಲ್ಲದಣಿ, ತ್ಯಪ್ ಮಾಡಿದ್ರೆ ಓಕ್ಕಳ್ಳಿ ಅಂತ ಬುದ್ಬೇಕಂತೆ, ಕುಣಕoತ ಪಾಠವ ಹೇಳ್ಬೇಕಂತೆ.
ಮಕ್ಳು ತ್ಯಪ್ ಮಾಡ್ದಾಗ ನಾಕ್ ಬಿಡ ಬದ್ಲು, ಫಿಲಂನವರ ತರ ಡ್ಯಾನ್ಸ್ ಮಾಡಿದ್ರೆ, ಆ ಮುಂಡೆ ಮಕ್ಳಿಗ್ ಇದ್ಯೆ ತಲಿಗ್ ಓಗದಾದ್ರು ಎಂಗೆ ಅಂತೀನಿ.
ಅದ್ರುಮೇಲೆ ಊಟ ಕೊಡೊ ಕಾನೂನ್ ಬೇರೆ ಬಂದದೆ ಈಗ, ಮುಂಡೇವ್ಕೆ ಇದ್ಯೆಗಿಂತ ನೈವೇದ್ಯೇ ಮೇಲೇ ಕಣ್ಣು, ಏನ್ ರಂಗಣ್ಣ ಸಾಂತವ್ವ ತಿನ್ನಕ್ ಏನ್ ಮಾಡವ್ಳೆ ಇವತ್ತು ಅಂತವೆ ತ್ಯಪ್ರು ಮುಂಡೇವು.
ಆಕಡೆ ಚಿತ್ರನ್ನ ಘಮ್ಗುಟ್ಟoಗಿಲ್ಲ, ಇತ್ಲಗಲೇ ಪಾಠ ಗೀಟ ಎಲ್ಲಾ ಓದಂಗೆಯ. ಈತರ ಇದ್ಯೆಯ ಕಲುತ್ರೆ, ಬೆಳ್ದಿoಗ್ಳಿಗೆ ಆವಿಯಾಯ್ತದೆ ಇದ್ಯೆ.
ಹಿಂದೆಲ್ಲ ಮ್ಯಾಡoಗಳು, ರಂಗಪ್ಪ, ಆ ನಾಟಕ್ವ ಮಾಡ್ಸೋಣು, ಹೆಣ್ ಮಕ್ಳಿಗೆ ಹಾಡು ರಂಗೋಲಿ ಹೇಳ್ ಕೊಡೋಣು, ಅದಕ್ಕೇ ಆ ಪುಸ್ತಕ್ವಾ ತಕ್ಕೊಂಬಾ, ಬಣ್ಣದ ಕೋಲ್ ತಕ್ಕೊಂಬಾ, ಒಸಿ ಮುಂಚೆ ಬಂದು ಕಿಲೀನು ಮಾಡು ಅಂತಿದ್ರೆ,
ಇವು, ಏನ್ ಊಟಕ್ ಇವತ್ತು, ಏನ್ ಮಾಡವ್ಳೆ ಸಾಂತವ್ವ, ಇವತ್ತು ಕೀರ್ ಮಾಡಕ್ ಹೇಳು, ಉಳ್ಲಾಗಡ್ಡಿ ಕಾಲಿಯಾಗದೆ ಜೊತೆಗೆ ಬೆಲ್ವಾ ತಕ್ಕೊಂಬಾ. ಬಡಕಬೇಕು ಇವ್ರ್ ಸಿಕ್ಸಣಕ್ಕೆ. ಪಾಟ್ವಾ ಕಲ್ಸೋ ಮುಸುಡಿಯ ಅದು, ಬಾಯ್ ಬಿಟ್ರೆ ಬಂಡಗೇಡು.
ಈ ಕತೆಲಿ ಬರ್ಬರ್ತಾ ಬರ್ಬರ್ತಾ, ಎಲ್ಲ ಮುಗಿತದೆ. ಸಾಲೆಯ ಮುಚ್ತಾರೆ, ಅಲ್ಲಿಗ್ ನಾನು ನನ್ನ ಸರ್ವಿಸ್ ಮುಗುಸ್ತಿನಿ, ಇನ್ನೊಂದ್ ಮೂರ್ ಉಗಾದಿ ಕಳದ್ರೆ ನಾನು ಮನೆಯ ಸೇರ್ಕೊಳದೆ.
ಗೊರ್ಮೆಂಟ್ಗೆ ಸರ್ಕಾರ್ವ ನಡ್ಸುಕ್ ಆಗುಕ್ಕಿಲ್ಲ, ಇನ್ ಸಾಲಿನ.. ಕಣಸು..
ಚಿಕ್ ವಯಸಿನ್ ಇದ್ಯೇನ ಒಬ್ರಿಗ್ ಒಂದು, ಇನ್ನೊಬ್ರಿಗ್ ಒಂದು ಕೊಟ್ರೆ ಸಮಾಜ ಉಳಿತದಾ ದಣಿ, ಏರು ಪೇರು ಉಟ್ಟಿ ಸಾಯ್ತವೆ ಪಾಪ. ಈ ಪ್ರೈವೇಟ್ ನನ್ ಮಕ್ಳಿಂದ ಆಗ್ತಿರೋದ್ ಇದೆಯಾ...
-ಹರೀಶ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ